Sunday, November 22, 2009

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ ಮೇಟಿ ಮಲ್ಲಿಕಾರ್ಜುನ

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ
ಮೇಟಿ ಮಲ್ಲಿಕಾರ್ಜುನ
ಸೋಮವಾರ, 8 ಜೂನ್ 2009 (07:56 IST)
ನೋಮ್ ಚೋಮ್‌ಸ್ಕಿ
ನೋಮ್ ಚೋಮ್‌ಸ್ಕಿ ನಮ್ಮ ಕಾಲದ ಬಹು ಮುಖ್ಯ ಮತ್ತು ಬಹುಮುಖಿ ವಿದ್ವಾಂಸ. ಆಧುನಿಕ ಭಾಷಾಶಾಸ್ತ್ರದ ಆದ್ಯ ಪ್ರವರ್ತಕ, ತತ್ವಜ್ಞಾನಿ, ರಾಜಕೀಯ ಹಾಗೂ ಸಾಮಾಜಿಕ ವಿಶ್ಲೇಷಕ, ಮಾಧ್ಯಮ ಟೀಕೆಕಾರ. ಚೋಮ್‌ಸ್ಕಿ ಸಾಕಷ್ಟು ವಿಷಯಗಳನ್ನು ಕುರಿತು ತಮ್ಮ ಚಿಂತನೆಗಳನ್ನ ಮಂಡಿಸಿದ್ದಾರೆ. ಭಾಷಾಶಾಸ್ತ್ರ, ಯುದ್ಧ ವಿರೋಧ ನೀತಿ, ಅಮೆರಿಕಾದ ವಿದೇಶಾಂಗ ನೀತಿ, ಅಂತರಾಷ್ಟ್ರೀಯ ಬಿಕ್ಕಟ್ಟುಗಳು, ಭಯೋತ್ಪಾದನೆ, ಸಾಮ್ರಾಜ್ಯಶಾಹಿತ್ವ, ಆರ್ಥಿಕ ಬಿಕ್ಕಟ್ಟು, ಜಾಗತೀಕರಣ, ಅಣು ಒಪ್ಪಂದ, ನ್ಯೂಕ್ಲಿಯರ್ ವೆಪನ್ಸ್ ಮುಂತಾದವುಗಳ ಬಗ್ಗೆಯಲ್ಲ ಅವರ ವಿಚಾರ ಸರಣಿ ಹರಿದಿದೆ. ಅಮೆರಿಕಾ ಪ್ರಭುತ್ವದ ವಿರುದ್ಧ ಮಾತನಾಡುವ ಛಾತಿಯಿರುವ ಏಕೈಕ ಭಿನ್ನಮತೀಯ ಆನಾರ್ಕಿಸ್ಟ್ ಚಿಂತಕ. ಅಮೆರಿಕಾದ ‘ದಿ ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಯು ನೋಮ್ ಚೋಮ್‌ಸ್ಕಿ ಜಗತ್ತಿನಲ್ಲೆ ಜೀವಂತವಿರುವ ಬಹುದೊಡ್ಡ ಬುದ್ಧಿಜೀವಿ ಎಂದೂ ಬಣ್ಣಿಸಿದೆ. ಚರಿತ್ರೆಯಲ್ಲಿ ಚೋಮ್‌ಸ್ಕಿಯನ್ನು ಮತ್ತು ಇವರ ತಾತ್ವಿಕತೆಯನ್ನು ಡಾರ್ವಿನ್ ಮತ್ತು ಡೆಕಾರ್ಟಸ್ ಅವರಷ್ಟೆ ಪ್ರಮುಖ ಮತ್ತು ಅವರಿಗೆ ಸಮಸಮ ಎಂದು ಗುರುತಿಸಲಾಗಿದೆ. ಇವರನ್ನು ಜಗತ್ತಿನ ಪ್ರಖ್ಯಾತ ಹತ್ತು ಜನ ವಿದ್ವಾಂಸರಲ್ಲಿ ಒಬ್ಬರನ್ನಾಗಿ ಬಣ್ಣಿಸಿರುವುದು ವಿಶೇಷ.

ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸ್ಸಾಚುಸೆಟ್ಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚೋಮ್‌ಸ್ಕಿರಿಗೆ ೧೯೫೫ರಲ್ಲಿ ಪ್ರಾಧ್ಯಾಪಕ ಹುದ್ದೆ ಲಭಿಸಿತು. ಇಲ್ಲಿ ಪ್ರಾಯೋಗಿಕ ವಿಜ್ಞಾನಿಗಳ ವಿಭಾಗದಲ್ಲಿ ಅವರಿಗೆ ಸ್ವತಂತ್ರ ಅಧಿಕಾರವನ್ನು ಕೊಡಲಾಗಿತ್ತು. ಇದು ಚೋಮ್‌ಸ್ಕಿಗೆ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗವನ್ನು ಸ್ಥಾಪಿಸಲು ಸಾಧ್ಯವಾಯ್ತು. ಕೆಲವೇ ದಿನಗಳಲ್ಲಿ, ಜಗತ್ತಿನಲ್ಲಿಯೇ ಈ ವಿಭಾಗವು ಪ್ರಗತಿಪರ ಮತ್ತು ಹೊಸ ಬದಲಾವಣೆಯ ಭಾಷಾಶಾಸ್ತ್ರದ ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಿತು.

ಚಿಂತಕ ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನದ ಕನ್ನಡಾನುವಾದ ಇಲ್ಲಿದೆ.

ಡೇವಿಡ್: ಈ ಮೊದಲು ಇದ್ದಂತ ಮಾಧ್ಯಮ ಪ್ರಕಾರಗಳಾದ ದೂರದರ್ಶನ, ರೇಡಿಯೋ, ಮತ್ತು ದಿನಪತ್ರಕೆಗಳನ್ನು ಬಂಡವಾಳಶಾಹಿಗಳು ತಮ್ಮ ಏಕಸ್ವಾಮ್ಯದಲ್ಲಿಟ್ಟುಕೊಂಡಿದ್ದರು. ಆದರೆ, ಇಂಟರ್‌ನೆಟ್‌ ಅನ್ನು ತಮ್ಮ ಸ್ವಾಮ್ಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಅನಿಸುತ್ತೆ. ಇದೇನಾದರೂ ಸಾಮಾಜಿಕವಾಗಿ ಪರಿಣಾಮ ಬೀರಿದೆ ಅಂತ ಅನ್ನಿಸುತ್ತಾ ನಿಮಗೆ?

ಚೋಮ್‌ಸ್ಕಿ: ಮೊದಲನೇಯದಾಗಿ, ಚಾರಿತ್ರಿಕವಾಗಿ ಇದು ನಿಜವಲ್ಲ, ನನಗೆ ಬೇರೆ ದೇಶಗಳ ಬಗ್ಗೆ ಏನು ಅಂತ ಗೊತ್ತಿಲ್ಲ. ಆದರೆ, ಆಧುನಿಕ ಮಾಧ್ಯಮದ ಇತಿಹಾಸವನ್ನು ಗಮನಿಸಿದರೆ, ವಿಶೇಷವಾಗಿ ಬ್ರಿಟನ್ ಮತ್ತು ಅಮೆರಿಕಾಕ್ಕೆ ಸಂಬಂಧಿಸಿದಂತೆ, ಕಳೆದ ಎರಡು ಶತಮಾನದಲ್ಲಿ ಮಾಧ್ಯಮವನ್ನು ಕುರಿತು ಗಣನೀಯ ಅಧ್ಯಯನ ಮಾಡಲಾಗಿದೆ. ಬಹುಶಃ ಹತ್ತೊಂಭತ್ತನೇಯ ಶತಮಾನವು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ ಕಾಲವಾಗಿತ್ತು. ಹಾಗೂ ಮಾಧ್ಯಮವು ಬಹಳ ಪರಿಣಾಮಕಾರಿಯಾಗಿ, ವಿಭಿನ್ನವಾಗಿ ಬೆಳದದ್ದು ಈಗಲೇ ಎಂದೂ ಹೇಳಬೇಕು. ಆಗೀನ ಪತ್ರಿಕಾ ಬಳಗಕ್ಕೆ ಜನರ ಬೆಂಬಲ, ಅವರ ಪಾಲ್ಗೊಳ್ಳುವಿಕೆ ಹಾಗೂ ಕೊಡುಗೆ ಅಪಾರ. ಹಾಗಾಗಿ, ಮಾಧ್ಯಮ ಹೆಚ್ಚು ಜನಗಳನ್ನು ತಲುಪಲು ಸಾಧ್ಯವಾಗಿತ್ತು. ಹಾಗೂ ವೈವಿದ್ಯಮಯ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ರೂಪಿಸಲಿಕ್ಕೂ ಸಾಧ್ಯವಾಗಿತ್ತು.

ಕ್ರಮೇಣ ಇದು ಬದಲಾಯಿತು. ಅಂದರೆ, ಬ್ರಿಟನ್‌ನಲ್ಲಿ ಸ್ವತಂತ್ರವಾಗಿದ್ದ ಪ್ರೆಸ್‌ಗಳನ್ನು ಸರಕಾರವು ತೆರಗೆ ವಿಧಿಸುವ ಮತ್ತು ಇನ್ನಿತರ ರೀತಿಗಳಲ್ಲಿ ಸೆನ್ಸಾರ್ ಮಾಡುವ ಪ್ರಯತ್ನಗಳನ್ನು ನಡೆಸಿತು. ಆದರೆ, ಈಗ ಇದು ಬದಲಾಗಿದೆ, ಇದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಇದರಿಂದ ಅಂತಿಮವಾಗಿ ಬಂಡವಾಳಶಾಹಿಯ ಕೈವಶ ಮತ್ತು ಜಾಹಿರಾತು-ಅವಲಂಬನೆಯ ಪ್ರಭಾವದಿಂದ ಸ್ವತಂತ್ರವಾಗಿ ನಡೆಯುತ್ತಿದ್ದ ಪ್ರೆಸ್‌ಗಳು ಮಣ್ಣುಪಾಲಾದವು. ಕಾರಣವೇನೆಂದರೆ, ಇವುಗಳಿಗೆ ಯಾವುದೇ ವ್ಯಾಪಾರದ ಸ್ಥಿರತೆಯಿಲ್ಲ, ಬಂಡವಾಳ ಹೂಡಿಕೆಯ ಕೊರತೆ ಮತ್ತು ಜಾಹಿರಾತುಗಳ ಅಭಾವ. ಹಾಗೂ ಕಾಲ ಕ್ರಮೇಣ ಮಾಧ್ಯಮವು ತನ್ನ ತೀಕ್ಷ್ಣತೆ ಮತ್ತು ವ್ಯಾಪಕತೆಯನ್ನು ಕಳೆದುಕೊಂಡಿತು. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಿಂದ ಇದು ನಿರಂತರವಾಗಿ ನಡೆದಿದೆ. ಹಾಗಾಗಿ, ಜನ ಬೆಂಬಲಿತ ಸ್ವತಂತ್ರ ಮಾಧ್ಯಮಗಳು ಬಹುತೇಕ ಕಣ್ಮರೆಯಾಗಿವೆ.

ಉದಾಹರಣೆಗೆ ಅಮೆರಿಕಾದಲ್ಲಿ ಐವತ್ತರ ದಶಕದಲ್ಲಿ ಸುಮಾರು ಎಂಟನೂರು ಕೂಲಿ/ಕಾರ್ಮಿಕ ಬೆಂಬಲಿತ ದಿನ ಪತ್ರಿಕೆಗಳು ವಾರಕ್ಕೆ ಅಂದಾಜು ಮೂವತ್ತು ಮಿಲಿಯನ್ ಜನರಿಗೆ ತಲುಪುತ್ತಿದ್ದವು. ಆದರೆ ಇಂದು ಇದು ಖಂಡಿತವಾಗಿ ಸಂಪೂರ್ಣ ಮಾಯವಾಗಿದೆ. ಹಿಂದಿನ ಶತಮಾನದ ಪ್ರಾರಂಭದ ದಿನಗಳನ್ನು ಅವಲೋಕಿಸಿದರೆ, ಜನಪರವಾದ ಪತ್ರಿಕೆಗಳು ಅಂದರೆ ನಾವು ಯಾವುದನ್ನು ಎಡಪಂಥೀಯ ಪ್ರಣೀತ ನಿಯತಕಾಲಿಕವೆಂದು ಕರೆಯುತ್ತಿದ್ದೆವೊ? ಅವುಗಳು ಯಾವುದೇ ಕಮರ್ಷಿಯಲ್ ಪತ್ರಿಕೆಗಳ ರೆಂಜಿಗಿಂತೇನು ಕಮ್ಮಿಯಿರಲಿಲ್ಲ. ಇಂಗ್ಲೆಂಡಿನ ಸ್ಥಿತಿಯೂ ಇದೇ ಆಗಿತ್ತು. ಹಾಗಾಗಿ ಮಾಧ್ಯಮವು ನಿರಂತರವಾಗಿ ಏಕಸ್ವಾಮ್ಯದಲ್ಲಿತ್ತು ಎನ್ನುವದು ಸಂಪೂರ್ಣವಾಗಿ ನಿಜವಲ್ಲ. ಆದರೆ, ಕ್ರಮೇಣ ಬಂಡವಾಳಶಾಹಿ ಸಂಚಿತ ಬೆಳವಣಿಗೆ ಮತ್ತು ಜಾಹಿರಾತುಗಳ ಅವಲಂಬನೆಯಿಂದ ಈ ಪ್ರಕ್ರಿಯೆ ಮೊದಲುಗೊಂಡಿತು.

ಆಧುನಿಕ ಆರ್ಥಿಕ ವ್ಯವಸ್ಥೆಯ ಹಾಗೆಯೇ ಇಂಟರ್‌ನೆಟ್ ಕೂಡ ಬಹಳ ಪ್ರಮುಖವಾದ ವ್ಯವಸ್ಥೆ. ಮೊದಲು ಸುಮಾರು ಮೂರು ದಶಕಗಳ ಕಾಲ ಇಂಟರ್‌ನೆಟ್‌ ರಾಷ್ಟ್ರ-ಪ್ರಭುತ್ವ ವ್ಯವಸ್ಥೆಯಲ್ಲಿ ಬೆಳೆಯಿತು. ಅದು ಪೆಂಟಗಾನ್ ಇರಬಹುದು ಅಥವಾ ನಂತರದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ಆಗಿರಬಹುದು. ಆದರೆ, ಇದು ತೊಂಬತ್ತರ ದಶಕದ ಮಧ್ಯದಲ್ಲಿ ಖಾಸಗೀಕರಣಗೊಂಡಿತು ಆವಾಗಿನಿಂದ ಇದರ ಏಕಸ್ವಾಮ್ಯದ ಸ್ವರೂಪ ಬದಲಾಗಿದೆ. ಅಲ್ಲಿಯವರೆಗೆ ಅದನ್ನು ನಿಯಂತ್ರಿಸುವದು ಕಷ್ಟಸಾಧ್ಯವಾಗಿತ್ತು. ಜನಗಳು ತಮ್ಮ ಸ್ವಂತಕ್ಕೆ ಬೇಕೆಂದರೆ ಬಳಸಬಹುದಿತ್ತು. ಆದರೆ ಮುಖ್ಯವಾಗಿ ಕಾರ್ಪೊರೇಟ್ ಉದ್ಯಮಿಗಳು ಮತ್ತು ಜಾಹಿರಾತು ಮಾಲೀಕರು ಇಂಟರ್‌ನೆಟ್‌ ಅನ್ನು ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಅಂದರೆ, ಇದನ್ನು ಹೆಚ್ಚಾಗಿ ಜಾಹಿರಾತು, ವಾಣಿಜ್ಯ, ಮನೋರಂಜನೆ ಮತ್ತು ಮುಂತಾದವುಗಳಿಗೆ ಬಳಸುತ್ತಿದ್ದರು. ಆದ್ದರಿಂದಲೇ, ಮಾಹಿತಿ ಉಪಯೋಗ, ರಾಜಕೀಯ ಸಂಘಟನೆ ಮತ್ತು ಇನ್ನಿತರ ಜನಪರ ಚಟವಟಿಕೆಗಳಿಗೆ ಬಳಸಿಕೊಳ್ಳಲಕ್ಕೆ ಕಷ್ಟಕರವಾಗಿತ್ತು. ಈಗಲೂ ಇದು ನಿರೀಕ್ಷಿತ ಮಟ್ಟಕ್ಕೆ ಸಾಧ್ಯವಾಗಿಲ್ಲವಾದರೂ, ನಿಜವಾಗಲೂ ಇದೊಂದು ಅಗಾಧವಾದ ಹೋರಾಟವಾಗಿದೆ. ಆದರೆ, ಸ್ವಲ್ಪಮಟ್ಟಿಗೆ ಮೊದಲಿನ ದಿನಪತ್ರಿಕೆ ನಂತರದ ರೇಡಿಯೋ ಹಾಗೂ ಈಗೀನ ದೂರದರ್ಶನದಂತೆ ಇಂಟರ್‌ನೆಟ್ ಕೂಡಾ ಸಹಾಯವಾಗಿದೆಂದು ಹೇಳಲಡ್ಡಿಯಿಲ್ಲ.

ಡೇವಿಡ್: ರಾಜಕೀಯವಾಗಿ ಇಂಟರ್ ನೆಟ್ ಯಾವ ಬಗೆಯ ಪಲ್ಲಟಗಳನ್ನು ಸೃಷ್ಟಿಸಿದೆ ಅಂತ ಅನಿಸುತ್ತೆ ನಿಮಗೆ? ಮಾನವ ಹಕ್ಕು ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆ/ಏಳ್ಗೆಗಾಗಿ ಇದೊಂದು ಮಾನದಂಡವಾಗಿ ಪರಿಗಣಿಸುತ್ತಿರಾ?

ಚೋಮ್‌ಸ್ಕಿ
: ಇಂಟರ್‌ನೆಟ್‌ನ ಆಗಮನವೇ ಒಂದು ದೊಡ್ಡ ಪ್ರಭಾವವನ್ನು ಸೃಷ್ಟಿಸಿತು. ಹಾಗಾಗಿ, ಕಳೆದ ಹತ್ತು ವರ್ಷಗಳಿಂದ ನಡೆದ ರಾಜಕೀಯ ಅಥವಾ ಸಾಮಾಜಿಕ ಸಂಘಟನಾತ್ಮಕ ಮತ್ತು ಕ್ರೀಯಾತ್ಮಕ ಚಟವಟಿಕೆಗಳು ಇಂಟರ್‌ನೆಟ್‌ ಅನ್ನು ಆಧರಿಸಿಕೊಂಡು ರೂಪಗೊಂಡಿವೆ. ನಿಜ ಇದರ ಫಲವಾಗಿ ಇಂಡೋನೆಷಿಯಾದೊಳಗಿದ್ದ ಸರ್ವಾಧಿಕಾರತ್ವವನ್ನು ನಿರ್ಮೂಲನಗೊಳಿಸಲಕ್ಕೆ ಇಂಟರ್‌ನೆಟ್ ಜನಗಳ ಮಧ್ಯೆ ಸಂಪರ್ಕ ಕಲ್ಪಿಸಲು ಬಹಳ ಅನಕೂಲಕರವಾಗಿರುವುದನ್ನು ಗಮನಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಘಟನೆಗೊಂಡು ಈ ಸರ್ವಾಧಿಕಾರತ್ವವನ್ನು ಉಚ್ಛಾಟಿಸಲು ಸಾಧ್ಯವಾದದ್ದು ಇದರಿಂದಲೇ. ಈಗಲೂ ಇಂಟರ್‌ನೆಟ್ ದಕ್ಷಿಣಕೊರಿಯಾದಲ್ಲಿ ಬಹಳ ಪ್ರಜಾಸತ್ತಾತ್ಮಕವಾಗಿ ರೂಪಗೊಂಡಿರುವದನ್ನು ಗಮನಿಸಿದ್ದೇವೆ.

ಪ್ರತಿ ಬಂಡವಾಳಶಾಹಿಯ ಉದ್ದೇಶವು ಸಮಾಜದ ಮೂಲಧಾತು ಮಾಧ್ಯಮವನ್ನು ಕೇಂದ್ರಿಕರಿಸಿಕೊಂಡು ತಮ್ಮ ವ್ಯವಹಾರವನ್ನು ಸುಲಭವಾಗಿ ಈಡೇರಿಸಿಕೊಳ್ಳುವದೇ ಆಗಿದೆ. ಆದರೆ ಪ್ರಪಂಚದಲ್ಲಿಯೇ ದಕ್ಷಿಣಕೊರಿಯಾವು ಬಹಳ ನರವ್ಸ್ ಆದ ದೇಶವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇಂಟರ್‌ನೆಟ್‌ನ ಮೂಲಕ ಮತ್ತು ಇಂಟರ್‌ನೆಟ್‌ ಅನ್ನು ಒಂದು ಬೃಹತ್/ಸ್ವತಂತ್ರ ಮಾಧ್ಯಮ ವ್ಯವಸ್ಥೆಗೆ ಪರ್ಯಾಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಅಂತ ಅನಿಸುತ್ತದೆ. ಹಾಗೂ ಇದೇ ಅವರ ಇವತ್ತಿನ ರಾಜಕೀಯ ಜಯಕ್ಕೆ ಮತ್ತು ಒಬ್ಬ ಸುಧಾರಣಾವಾದಿ ಅಧ್ಯಕ್ಷರ ಆಯ್ಕೆಗೆ ಮುಖ್ಯ ಕಾರಣ ಎಂದೂ ಹೇಳಬಹುದು. ಈ ಪ್ರಸ್ತುತ ಸರಕಾರಕ್ಕೆ ಸಾಕಷ್ಟು ಜನ ಬೆಂಬಲ ದಕ್ಕಲಿಕ್ಕೂ ಇಂಟರ್‌ನೆಟ್ಟೇ ಕಾರಣ. ಇದೆಲ್ಲವನ್ನು ಇಂಟರ್‌ನೆಟ್-ಮಾಧ್ಯಮದಿಂದ ಮಾಡಲಿಕ್ಕೆ ಸಾಧ್ಯವಾಗಿದೆ ಎಂದೇ ಹೇಳಬೇಕು.

ಹೌದು, ಇಂಟರ್‌ನೆಟ್‌ನಿಂದ ಇದೆಲ್ಲಾ ಸಾಮಾನ್ಯವಾಗಿದೆ. ಆದ್ದರಿಂದಲೇ ಅಂತರಾಷ್ಟ್ರೀಯ ಸಂಘಟನೆಯು ದಿಗ್ಭಂಧಗೊಳಿಸಿದ್ದ ಬಹುಪಕ್ಷೀಯ ಒಪ್ಪಂದದ ಹೂಡಿಕೆಯನ್ನು ಇಂಟರ್‌ನೆಟ್‌ನ ಸಹಾಯದಿಂದ ಇದನ್ನು ಸಂಪೂರ್ಣವಾಗಿ ಸಾಬೀತಪಡಿಸಿಲಾಗಿದೆ. ಮೂಲಭೂತವಾಗಿ, ಮಾಧ್ಯಮಕ್ಕೆ ಇದೆಲ್ಲಾ ಸಾಧ್ಯವೇ ಇಲ್ಲ ನೋಡಿ. ಇವತ್ತು ಜಾಗತಿಕ ಸಾಮಾಜಿಕ ವೇದಿಕೆ [ವರ್ಲ್ಡ್ ಸೋಸಿಯಲ್ ಫೋರಮ್] ಇಷ್ಟೊಂದು ಬೃಹತ್ ಸಂಘಟನೆಯಾಗಿ ರೂಪಗೊಳ್ಳಲು, ಅದರ ಸಭೆಗಳಿಗೆ ಸಾವಿರಾರು ಜನ ಸೇರಲು ಹಾಗೂ ಜಗತ್ತಿನ ಪ್ರತಿ ಮೂಲೆಯಿಂದಲೂ ಜನ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾದದ್ದೂ ಇಂಟರ್‌ನೆಟ್‌ನ ಸಂಘಟನೆಯಿಂದಲೇ ಎಂದೂ ಹೇಳಬೇಕು. ಆದರೆ, ಮಾಸ್ ಮೀಡಿಯಾವು ಇಷ್ಟೆಲ್ಲಾ ಅವಕಾಶಗಳನ್ನು ಇಂತಹ ಸಂಘಟನೆಗಳಿಗೆ ಯಾವತ್ತೂ ಕೊಡಲಾರದು. ಇಂತಹ ಸಾಕಷ್ಟು ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಡೇವಿಡ್: ನಮ್ಮ ಜನಾಂಗ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕನ್ನು ಕುರಿತು ಪ್ರಗತಿ ಸಾಧಿಸಿದೆ ಎಂದು ನಿಮಗೇನಾದರೂ ಅನ್ನಿಸಿದೆಯೇ?

ಚೋಮ್‌ಸ್ಕಿ
: ಹೌದು ಇದರಿಂದ ಪ್ರಗತಿಯೂ ಅಗಿದೆ ಹಾಗೂ ವೈಪಲ್ಯವೂ ಇದೆ. ಆದರೆ ಇದರ ಬೇರುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಆಗಿದೆ ಎಂದು ಹೇಳಬಹುದು. ಆದರೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಹೇಳುವದೆಂದರೆ ಇದು ಬಹಳ ಜಟಿಲವಾದದ್ದು. ಔಪಚಾರಿಕ ರೀತಿಯಲ್ಲಿ ಪ್ರಜಾಪ್ರಭುತ್ವ ಬೆಳದಿದೆ ಎಂದು ಹೇಳಲಡ್ಡಿಯಿಲ್ಲ. ಇದರರ್ಥ ಪ್ರಜಾಪ್ರಭುತ್ವ ಎಂದರೆ ಮತ ಚಲಾಯಿಸುವ ಶಕ್ಕಿಯನ್ನು ಪಡಕೊಂಡಿದ್ದನ್ನೆ ಪ್ರಜಾಪ್ರಭುತ್ವದ ಬೆಳವಣಿಗೆ ಎನ್ನಬಹುದು. ಇದು ಮಾತ್ರವಲ್ಲದೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಚಲಾಯಿಸುವುದಕ್ಕೆ ಅಡ್ಡಿ-ಆತಂಕಗಳೂ ಬೆಳದಿವೆ. ಈ ಕಾರಣಗಳಿಂದಲೇ ಜಗತ್ತಿನಾದ್ಯಂತ ಪ್ರಜಾಪ್ರಭುತ್ವವ ಕುರಿತ ಸಾಕಷ್ಟು ಗುಮಾನಿ, ನಿರಾಸೆಗಳು ಮತ್ತು ಸಿನಿಕತನ ಬೆಳದಿದೆ. ಇದಕ್ಕೆ ಅಮೆರಿಕಾವೇನು ಹೊರತಾಗಿಲ್ಲ.

ಅಂದರೆ, ಅಮೆರಿಕಾದ ಸಮಾಜಗಳು ಬಹಳ ಮುಕ್ತ ಮತ್ತು ಪ್ರಜಾಸತ್ತಾತ್ಮಕವೆಂದು ಬೀಗುವ ದೇಶದಲ್ಲಿಯೇ ಈ ದೇಶದ ಒಟ್ಟು ಜನರ ಮುಕ್ಕಾಲು ಭಾಗ ಜನ ಶ್ರೀಮಂತರು ಮತ್ತು ಔದ್ಯೋಗಿಕ ವಲಯದ ಜನರೊಡ್ಡುವ ಆಮಿಷಕ್ಕೆ ಈ ದೇಶದ ಅಧ್ಯಕ್ಷೀಯ ಚುನಾವಣೆಯು ಸಾಮಾನ್ಯವಾಗಿ ಒಂದು ನಕಲಿ ಆಟದಂತೆ ಹಾಗೂ ಚುನಾವಣಾ ಅಭ್ಯರ್ಥಿಗಳು ಕೂಡ ಈ ಶ್ರೀಮಂತ ಮತ್ತು ಬಂಡವಾಳಶಾಹಿಗಳ ನಿರ್ದೇಶನದಂತೆ ತಮಗೆ ತಿಳಿಯದ ಮತ್ತು ಹೊಳೆಯದನ್ನು ಹೇಳುತ್ತಾರೆ. ಈಗ ಈ ಜನಗಳ ಸಂಖ್ಯೆಯೇ ಹೆಚ್ಚುತ್ತಿದೆ. ಈ ಯಥಾಸ್ಥಿತಿ ಲ್ಯಾಟಿನ್ ಅಮೆರಿಕಾ ಮತ್ತು ಜಗತ್ತಿನ ಉದ್ದ ಅಗಲಕ್ಕೂ ನಡೀತಾ ಇದೆ. ಆದ್ದರಿಂದ, ಒಂದು ಔಪಚಾರಿಕ ಪ್ರಜಾಪ್ರಭುತ್ವ ಖಂಡಿತಾ ಬೆಳೆಯುತ್ತಿದೆ ಎನ್ನಬಹುದು. ಆದರೆ, ನಿಜವಾದ ಪ್ರಜಾಪ್ರಭುತ್ವ ಬೆಳೆಯುತ್ತಿದೆ ಎಂದು ಸಾರ ಸಗಟಾಗಿ ಹೇಳಲಿಕ್ಕೆ ನನಗೆ ಸಾಧ್ಯವಿಲ್ಲ.

ಡೇವಿಡ್:
ಅಮೆರಿಕಾ ಮತ್ತು ಜಗತ್ತಿನ ಇತರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏನು ಮಾಡಬೇಕಂತ ತಮಗೆ ಅನಿಸುತ್ತೇ?

ಚೋಮ್‌ಸ್ಕಿ: ೨೦ನೇ ಶತಮಾನದ ಅಮೆರಿಕಾದ ಖ್ಯಾತ ಸಾಮಾಜಿಕ ತತ್ವಜ್ಞಾನಿ ಜಾನ್ ದೇವಯ್‌ ರವರು ಸರಿಯಾಗಿ ಗುರುತಿಸಿದಂತೆ ರಾಜಕಾರಣವು ಬಂಡವಾಳಶಾಹಿಗಳು ಆಡಿಸುವ ಗೊಂಬೆಯಾಟದಂತೆ. ಇದರರ್ಥ ಎಲ್ಲಿಯವರೆಗೆ ನಾವು ಖಾಸಗಿ ಅಧಿಕಾರ ಮತ್ತು ಸಂಪತ್ತಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿವೋ ಅಲ್ಲಿಯವರೆಗೆ ನಮ್ಮ ಆರ್ಥಿಕತೆಯಲ್ಲಿ ನಿರಂಕುಶ ವ್ಯವಸ್ಥೆ ಇದ್ದೆಇರುತ್ತೆ. ಒಟ್ಟಿನಲ್ಲಿ ಬಿಸನೆಸ್ ವಲಯವು ಬುಡದಿಂದ ಮೇಲಿನವರೆಗೂ ಸರ್ವಾಧಿಕಾರಿ ಅನುಕ್ರಮದಲ್ಲಿರುತ್ತೆ. ಈ ಮನೋಧರ್ಮ ಮುಂದುವರಿದಷ್ಟು ಪ್ರಜಾಪ್ರಭುತ್ವ ಕ್ಷೀಣಿಸುತ್ತಲೇ ಇರುತ್ತೆ. ಪ್ರಜಾಸತ್ತಾತ್ಮಕ ಬೆಳವಣಿಗೆಯಿಂದಲೇ ಇಂತಹ ಬಂಡವಾಳಶಾಹಿಗಳ ಅಧಿಕಾರ ಮತ್ತು ಸಂಪತ್ತಿನ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯ. ಹಾಗೂ ಎಲ್ಲ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ರೀತಿ-ರಿವಾಜುಗಳಿಂದ ರೂಪಿಸಲು ಅನುವಾಗುತ್ತೆ. ಇದನ್ನೆ ಜಾನ್ ದೇವಯ್‌ ರವರು ಇಂಡಸ್ಟ್ರಿಯಲ್ ಫ್ಯೂಡಲಿಸಮ್‌ನಿಂದ ಇಂಡಸ್ಟ್ರಿಯಲ್ ಡೆಮಾಕ್ರೆಸಿ ಎಂದೂ ಬಣ್ಣಿಸಿದ್ದಾರೆ. ಇದು ಕೇವಲ ಇಂಡಸ್ಟ್ರಿಗೆ ಮಾತ್ರ ಅನ್ವಯಿಸಿದೆ ಅಂತಲ್ಲ ಎಲ್ಲ ಸಂಸ್ಥೆಗಳಿಗೆ ಅನ್ವಯಿಸುವಂತಹದು. ಇದು ಸಾಂಪ್ರದಾಯಕ ದೃಷ್ಟಿಕೋನವಾದರೂ ನನಗೂ ಇದೆ ಸರಿ ಅನಸುತ್ತೆ.

ಡೇವಿಡ್:
ಜಾಗತಿಕ ವ್ಯಾಕರಣವು [ಯುನಿವರ್ಸಲ್ ಗ್ರಾಮರ್] ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಅನ್ನುವುದೇನಾದರೂ ಇದಿಯೇ? ಇದಕ್ಕೆ ನಿಮ್ಮ ಭಾಷಾಶಾಸ್ತ್ರದ ತಿಳುವಳಿಕೆಯಿಂದ ಏನಾದರೂ ಸಹಾಯವಾಗಿದಿಯೇ?

ಚೋಮ್‌ಸ್ಕಿ: ನಿಜ, ನನ್ನ ಭಾಷಾಶಾಸ್ತ್ರದ ತಿಳುವಳಿಕೆ ಇದಕ್ಕೇನು ಅಂತಹ ಸಹಾಯ ಮಾಡಿಲ್ಲ. ಆದರೆ ಇದು ಸರಿ ಅನ್ನಿಸುತ್ತೆ. ಯಾಕೆಂದರೆ ಈ ತಿಳುವಳಿಕೆ ಆಧುನಿಕ ಭಾಷಾಶಾಸ್ತ್ರ ಹೊರಹೊಮ್ಮವ ಮೊದಲೇ ಸಾಕಾರಗೊಂಡಿತ್ತು. ಇದನ್ನು ಹದಿನೆಂಟನೇ ಶತಮಾನದ ಬ್ರಿಟಿಷ್ ತತ್ವಜ್ಞಾನಿ ಡೇವಿಡ್ ಹ್ಯೂಮ್ ಸರಿಯಾಗಿ ಗುರುತಿಸಿರುವಂತೆ - ಕರ್ತವ್ಯದ ಸಂಖ್ಯೆ ಅಪರಿಮಿತವಾಗಿದೆ. ಅಂದರೆ, ಇವುಗಳಲ್ಲಿ ಹೆಚ್ಚಿನವು ಹೊಸ ಬಗೆಯ ಕರ್ತವ್ಯಗಳಾಗಿರುತ್ತವೆ. ಇಂತಹ ಅಪಾರ ಸಂದರ್ಭಗಳಲ್ಲಿ ನಾವೇನೂ ಮಾಡಬೇಕು ಎನ್ನುವ ತಿಳುವಳಿಕೆ ಇದ್ದೆಇರುತ್ತೆ. ಇದು ಯಾವಾಗ ಸಾಧ್ಯವೆಂದರೆ ಮನುಷ್ಯನ ಸ್ವಭಾವ ಕೆಲವು ನಿಶ್ಚಿತ ತತ್ವಗಳನ್ನು ಆಧರಿಸಿಕೊಂಡಿದ್ದರೆ ಇದರಿಂದ ಸಾಧಿತಗೊಳ್ಳುವ ತಿಳುವಳಿಕೆ ನಮ್ಮ ನೈತಿಕ ಜವಾಬ್ದಾರಿಗಳನ್ನು ಗುರುತಿಸುತ್ತೆ ಅಂತ ಹ್ಯೂಮ್ ಹೇಳುತ್ತಾನೆ. ಇದು ಸಹಜವಾಗಿಯೇ ನಮಗೆ ಕೊಡಮಾಡಲ್ಪಟ್ಟಿದೆ. ಹ್ಯೂಮ್ ಇದನ್ನು ಹದಿನೆಂಟನೇ ಶತಮಾನದಲ್ಲಿ ಹೇಳಿದಂತೆby "the original hand of nature." ಇದು ನಮ್ಮ ಸ್ವಭಾವಕ್ಕೆ ಪೂರಕವಾಗಿ ವಿಕಾಸ ಹೊಂದಿದೆ ಎಂದು ಹೇಳಬಹುದು.

ಅಲ್ಲಿ ಬೇರೆ ಸಾಧ್ಯತೆಗಳೇನಿವೆ ಎಂದು ಗುರುತಿಸುವುದೇ ಕಷ್ಟಸಾಧ್ಯ. ಹಾಗಾಗಿ ಇದು ಕೂಡಾ ಭಾಷಿಕ ಜ್ಞಾನದ ಬೆಳವಣೆಗೆ ಹೇಗಾಗುತ್ತೆ ಅನ್ನವಷ್ಟೆ ಮುಖ್ಯವಾದ ತಿಳವಳಿಕೆಯಾಗಿದೆ. ಇದು ಅಪಾರ ಸಂದರ್ಭಗಳಲ್ಲಿ ನಮಗೆ ದಕ್ಕುತ್ತೆ. ಹಾಗಾಗಿ ಇದು ನಮ್ಮ ಸ್ವಭಾವದ ಭಾಗವೇ ಆಗಿರಬೇಕು.

ಉದಾಹರಣೆಗಾಗಿ, ಈಗ ನೀವು ಮತ್ತು ನಾನು ವ್ಯಕ್ತಪಡಿಸುವ ಎಷ್ಟೋ ಅಭಿಪ್ರಾಯಗಳು ನಮ್ಮ ಜೀವಮಾನದಲ್ಲಿಯೇ ಕೇಳರಿಯದವಾಗಿವೆ ಅಥವಾ ಅದಕ್ಕೂ ಮುಂಚೆ ಯಾರು ಕೂಡ ಅವುಗಳನ್ನು ಉದ್ಧರಿಸದೇ ಇದ್ದಿರಬಹುದು. ಆದಾಗ್ಯೂ ಈ ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳುತ್ತೇವೆ. ಯಾಕಂದರೆ, ನಮ್ಮ ಮನಸ್ಸು ಇಂತಹ ಅಪರಿಮಿತ ಅನುಭವಗಳನ್ನು ಅರ್ಥೈಸುವ ಮತ್ತು ವ್ಯಾಖ್ಯಾನಿಸುವ ನಿಗದಿತ ಅಂತರ್ಗತ ತಂತ್ರವನ್ನೊಳಗೊಂಡಿರುತ್ತೆ. ಹಾಗಾಗಿ ಜಾಗತಿಕ ವ್ಯಾಕರಣವು ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಇರುತ್ತೆ ಎಂದು ಹೇಳಬಹುದು. ನಮಗೆ ಭಾಷೆಯನ್ನು ಕುರಿತು ಏನಾದರೂ ಗೊತ್ತಿದೆಯೋ? ಇಲ್ಲವೋ? ಆದರೆ, ಹ್ಯೂಮ್‌ನ ತಿಳುವಳಿಕೆಗಳೇ ಸರಿ ಅನಿಸುತ್ತವೆ.

ಡೇವಿಡ್
: ಅಂತರ್ಗತವಾದ ನಮ್ಮ ಮನಸ್ಸಿನ ವಿನ್ಯಾಸಗಳು ಅದೇಗೆ ನಮ್ಮ ತಿಳುವಳಿಕೆಗೆ ಮಿತಿಗಳನ್ನು ವಿಧಿಸುತ್ತೆ ಅಂತ ನಿಮಗೆ ಅನಿಸುತ್ತೆ?

ಚೋಮ್‌ಸ್ಕಿ
: ಹೌದು, ಒಂದು ಪಕ್ಷ ನಾವೇನಾದರೂ ದೈವ ಮಾನವರಲ್ಲದೆ, ಸಾವಯವ ಜೀವಿಗಳಾಗಿದ್ದೇ ನಿಜವಾದರೆ ನಮ್ಮ ಅಂತರ್ಗತ ಲಕ್ಷಣಗಳು ನಮ್ಮ ವಿಕಾಸಕ್ಕೆ ಅವಕಾಶವನ್ನು ಒದಗಿಸುವದರ ಜೊತೆಗೆ ಮಿತಿಗಳನ್ನು ಒಡ್ಡುತ್ತವೆ. ವಾಸ್ತವ ಏನಂದರೆ ನಾನು ಮನುಷ್ಯ ಜೀವಿಯಾಗುವುದಕ್ಕೆ ಮನುಷ್ಯ ಜೀನ್ಸ್‌ಗಳೇ ಕಾರಣ ಬದಲಾಗಿ ಇಲಿಯ ಜೀನ್ಸ್‌ಗಳು ಅಲ್ಲ. ಹಾಗಾಗಿ ನಾನು ಇಲಿಯಾಗಲಿಕ್ಕೆ ಸಾಧ್ಯವಿಲ್ಲ. ಇದು ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೂ ಅನ್ವಯಿಸುತ್ತೆ. ಆದ್ದರಿಂದ, ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೆ ಯಾವುದೇ ಆನುವಂಶಿಕ ಆಧಾರಗಳಿದ್ದರೂ, ಅದು ನಮ್ಮ ಗ್ರಹಿಕಾ ವಿಕಾಸಕ್ಕೆ ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಸುಸೂತ್ರವಾಗಿ ಒದಗಿಸುತ್ತೆ. ಹಾಗೇನೆ ಈ ಆಯ್ಕೆಗಳಿಗೆ ಮಿತಿಗಳನ್ನು ಒಡ್ಡುತ್ತೆ ಅನ್ನುವದು ದಿಟ. ಹಾಗಾಗಿ, ನಮಗೇನಾದರೂ ಗ್ರಹಿಕಾ ಸಾಮರ್ಥ್ಯದ ಸಾಧ್ಯತೆಗಳು ಮತ್ತು ಮಿತಿಗಳು ಇದ್ದಿದ್ದೆ ಆದರೆ ಅವುಗಳು ತಾರ್ಕಿಕವಾಗಿ ಸಂಪರ್ಕಗೊಂಡಿರುತ್ತವೆ. ಅಂದರೆ ಇವುಗಳು ನಮ್ಮ ದೈಹಿಕ ಸಾಮರ್ಥ್ಯದಷ್ಟೇ ಸಹಜವಾಗಿರುತ್ತವೆ.

ಡೇವಿಡ್: ಅದೇಗೆ ನಿಮಗೆ ಭಾಷೆ ನಮ್ಮ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತೆ ಅಂತ ಅನ್ನಿಸುತ್ತೆ ಮತ್ತು ಯಾವುದನ್ನು ನಾವು ವಾಸ್ತವವಾಗಿ ಪರಿಭಾವಿಸುತ್ತೇವೆ.?

ಚೋಮ್‌ಸ್ಕಿ:
ಎಲ್ಲರು ಊಹಿಸುವ ಹಾಗೆ ನೀವೂ ಊಹಿಸಿದ್ದಿರಿ. ಅಂದರೆ, ನಮಗೆ ಗೊತ್ತಿರುವುದೆಲ್ಲ ಅದು ಹೆಚ್ಚು ಕಡಿಮೆ ನಮ್ಮ ಕಲ್ಪಿತ ಭಾವನೆ. ನೀವು ಗಮನವಿಟ್ಟು ಯೋಚಿಸಿ, ಈ ಮುಂದಿನ ಕೆಲವು ಗಂಟೆಗಳಲ್ಲಿ ನೀವು ಕಂಡುಕೊಳ್ಳಬಹುದಾದ ಸಂಗತಿಯೆನೆಂದು. ನಿರಂತರವಾಗಿ ನಿಮ್ಮಷ್ಟಕ್ಕೆ ನೀವು ಮಾತಾಡಿಕೊಳ್ಳುವದು ವೇಧ್ಯವಾಗುತ್ತೆ. ನಾವು ಒಂದು ಕ್ಷಣ ಕೂಡ ನಮ್ಮ ಆಂತರಿಕ ಸಂವಾದದಿಂದ ಮುಕ್ತವಾಗಿರೋಕೆ ಸಾಧ್ಯನೇ ಇಲ್ಲ. ಇದು ನಮ್ಮ ಪ್ರಜ್ಞೆಯ ಅಗಾಧತೆಯ ಭಾಗವಾಗಿರುತ್ತೆ. ಇದೆಲ್ಲವೂ ಒಂದು ಭಾಷೆಯ ಭಾಗವಾಗಿ ನಮ್ಮ ಪ್ರಜ್ಞೆಗೆ ದಕ್ಕುತ್ತೆ. ಇದು ಹೇಗೆ ನಮ್ಮ ಚಿಂತನೆ ಹಾಗೂ ಸಾಮಾನ್ಯ ತಿಳುವಳಿಕೆಯ ಮೇಲೆ ಪ್ರಭಾವ ಬೀರಬಲ್ಲದು ಎನ್ನುವುದನ್ನು ವಿವರಿಸುವದು ಕಷ್ಟ ಸಾಧ್ಯ. ಯಾಕಂದರೆ, ಚಿಂತನೆಯನ್ನು ಸಂಪರ್ಕಿಸಲಿಕ್ಕೆ ಭಾಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಾಧನ ನಮಗೆ ಲಭ್ಯವಿಲ್ಲ. ಹಾಗಾಗಿ ಇಂತಹ ಪ್ರಶ್ನೆಗಳನ್ನು ಕೇಳುವುದು ಕಷ್ಟ.

ಡೇವಿಡ್:
ಅಶಾಬ್ದಿಕ ಅಭಿವ್ಯಕ್ತಿಗಳು ಮತ್ತು ಯಾವುದೇ ಹಾವ-ಭಾವಗಳನ್ನು ಹೊರತುಪಡಸಿ, ಭಾಷೆಯು ಮನುಷ್ಯನ ಅಭಿವ್ಯಕ್ತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಅಂತ ಅನಿಸುತ್ತಾ? ಅಥವಾ ನಮ್ಮ ಸಾಂಪ್ರದಾಯಿಕ ವಿಜ್ಞಾನ ಗುರುತಿಸದ ವಿಶೇಷ ಸಂವಹನ ಕ್ರಮಗಳಾದ ಮೈಂಡ್-ರೀಡಿಂಗ್ (ಟೆಲಿಪತಿಕ್) ನಂತಹ ವೈಜ್ಞಾನಿಕ ಮಾದರಿಯ ಪಾತ್ರದ ಬಗ್ಗೆ ಅಥವಾ ಅಂತಹದೇ ಬೇರೆ ಯಾವುದಾದರೂ ಸಂವಹನ ಕ್ರಮಗಳನ್ನು ನೀವೇನಾದರೂ ಯೋಚಿಸಿದ್ದಿರಾ?

ಚೋಮ್‌ಸ್ಕಿ: ಮೂದಲನೆಯದಾಗಿ, ಭಾಷೆ ಖಂಡಿತವಾಗಿ ಸಂವಹನವನ್ನು ಸಂಪೂರ್ಣವಾಗಿ ನಿಭಾಯಿಸಲಾರದು. ಆದರೆ ನಾವು ಹಲವು ಬಗೆಗಳಲ್ಲಿ ಸಂವಹನವನ್ನು ನಿಭಾಯಿಸುತ್ತೇವೆ. ಅದು ಸನ್ನೆ ,ಉಡುಗೆ ನಮ್ಮ ಹೇರ್ ಸ್ಟೈಲ್ ಮುಂತಾದವುಗಳ ಮುಖೇನ ಸಂವಹನ ಪ್ರಕ್ರಿಯೆ ನಡೆಯುತ್ತದೆ. ಇವೆಲ್ಲವೂ ಕೂಡಾ ಸಂವಹನ ಕ್ರಿಯೆಗಳು. ಭಾಷೆ ಇವುಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಟೆಲಿಪತಿಕ್ ಮಾದರಿಗಳನ್ನು ನಂಬುವ ಅಗತ್ಯವಿಲ್ಲ. ಇವುಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳುವದು ನನ್ನ ಉದ್ಧೇಶವಲ್ಲ, ಅದಕ್ಕೆ ಸಾಕಷ್ಟು ಪುರಾವೆಗಳು ಬೇಕು. ಆದರೆ, ಇದು ವಿಚಿತ್ರವಾಗಿ ಕಾಣುತ್ತದೆ. ಯಾಕಂದರೆ ಯಾವುದೇ ವಾಸ್ತವಿಕ ಸಾಧ್ಯತೆಯನ್ನು ಅರ್ಥೈಸುವಲ್ಲಿ ಇದು ಸಫಲವಾಗಿಲ್ಲ. ಇದು ಅಪ್ಪಟ ಸುಳ್ಳು ಎಂದೂ ನಿರೂಪಿಸುವ ಅಗತ್ಯವಿಲ್ಲ. ಆದರೆ ಇದು ಅಸಮಂಜಸವಾದದ್ದು. ಇದರ ನಂಬುಗೆಯಲ್ಲಿ ಸಾಕಷ್ಟು ತೊಡಕುಗಳಿವೆ ಎಂದೇ ಅರ್ಥ.
.
ಡೇವಿಡ್: ದೇವರ ಕಲ್ಪನೆ ಬಗ್ಗೆ ನಿಮ್ಮ ದೃಷ್ಟಿಕೋನ ಏನು? ಹಾಗೂ ನೀವು ಅಲ್ಟಿಮೇಟ್ ಆಗಿ ವಿಕಾಸತ್ವದಲ್ಲಿ ಏನು ಕಾಣುತ್ತಿರಿ?
ಚೋಮ್‌ಸ್ಕಿ: ಇಂತಹ ಯಾವುದೆ ಕಲ್ಪನೆಗಳ ಮೌಲ್ಯವನ್ನು ಪ್ರಶ್ನಿಸುವದಕ್ಕೆ ಕಾರಣಗಳೀವೆ ಎಂದೂ ನನಗೇನೂ ಅನ್ನಿಸ್ತಾಯಿಲ್ಲ.

ಡೇವಿಡ್: ನಿಮಗೆ ವೈಯಕ್ತಿಕವಾಗಿ ಹೇಗೆ ಅನ್ನಿಸುತ್ತೆ ಸಾವಿನ ನಂತರ ಆತ್ಮಕ್ಕೆ ಏನಾಗುತ್ತೆ ಅಂತ?
ಚೋಮ್‌ಸ್ಕಿ: ನನಗೆ ಅನ್ನಿಸುವುದೆನಂದರೆ, ಅಲ್ಲಿಗೆ ಆತ್ಮದ ಕತೆಯೂ ಮುಗಿಯಿತು ಎಂದೂ.

ಡೇವಿಡ್:
ಮುಗಿಯಿತು ಅಂದರೆ ಅದೇ ಕೊನೆ ಅಂತಾನ?
ಚೋಮ್‌ಸ್ಕಿ: ಹೌದು ಅದೇ ಕೊನೆ. ಸಾವು ಅಂದರೆ ಸಜೀವದ ಕೊನೆ ಎಂದೇ ಅರ್ಥ, ಹಾಗೇನೆ ಈ ಜೀವದ ಎಲ್ಲಾ ಸಂಬಂಧಿತ ವ್ಯವಸ್ಥೆಗೆ ಇದು ಅನ್ವಯಿಸುತ್ತದೆ.

ಡೇವಿಡ್: ಮಾನವ ಕುಲಕ್ಕೆ ದೊಡ್ಡ ಅಪಾಯ ಇದೆ ಅಂತ ನಿಮಗೇನಾದರೂ ಅನ್ನಿಸುತ್ತದೆಯಾ? ಇದನ್ನು ತಪ್ಪಿಸುವದರ ಬಗ್ಗೆ ನಿಮ್ಮ ಯೋಚನೆ ಏನು?
ಚೋಮ್‌ಸ್ಕಿ: ಸಂಭವಿಸಬಹುದಾದ ಅತೀ ದೊಡ್ಡ ತಕ್ಷಣದ ಅಪಾಯವೆನಂದರೆ, ನ್ಯೂಕ್ಲಿಯರ್ ಯುದ್ಧ. ನಾವು ಎಷ್ಟೋ ಸಾರಿ ಈ ಪ್ರಾಣಾಂತಿಕ/ಮಾರಕ ನ್ಯೂಕ್ಲಿಯರ್ ಯುದ್ಧದಿಂದ ತಪ್ಪಿಸಿಕೊಂಡದ್ದು ನಿಜವಾಗಿ, ಒಂದು ಪವಾಡವೇ ಸರಿ. ಯಾಕಂದರೆ ಈ ಅಪಾಯಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತವೆ. ಉದಾ; ಸ್ಪೆಸ್‌ನಲ್ಲಿಯ ಮಿಲಿಟರಿಯ ವಿಸ್ತರಣೆ ಮತ್ತು ಬೆಳವಣಿಗೆಯು ಈ ಸ್ಪೆಸ್ ಆಧಾರಿತ ಧ್ವಂಸಕ ಕೃತ್ಯಗಳು, ಮುಟ್ಟಿದರೆ ಸ್ಪೋಟಗೊಳ್ಳಬಹುದಾದ (ಹೇರಿ-ಟ್ರಿಗರ್) ಭಯಾನಕ ಆಯುಧಗಳು ಅಚಾನಕ್ ಯಾವುದೇ ತರಹದ ಅಪಾಯವನ್ನುಂಟು ಮಾಡಬಹುದು.

ಇವುಗಳೇ ಸಧ್ಯದ ಅಪಾಯಗಳು. ಈ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಇನ್ನಿತರ ಸಮೂಹ ಧ್ವಂಸಕ ಸಂದರ್ಭಕ್ಕೂ ಅನ್ವಯಿಸುತ್ತದೆ. ಕ್ಷಣ ಕ್ಷಣಕ್ಕೂ ನ್ಯೂಕ್ಲಿಯರ್ ಆಯುಧಗಳು ವಿಪರೀತ ವಿಧ್ವಂಸಕವಾಗುತ್ತಿವೆ. ಹಾಗೂ ಜೈವಿಕ-ಆಯುಧಗಳು (ಬೈಯೋ-ವೆಪನ್ಸ್) ಉಗ್ರ ಮಾರಕ ಸ್ವರೂಪದಲ್ಲಿ ರೂಪಗೊಳ್ಳುತ್ತಿವೆ. ಈ ಜೈವಿಕ-ಆಯುಧಗಳ ಕುರಿತ ಒಡಂಬಡಿಕೆಯ ವಿಫಲತೆಯು ಜೀವಸಂಕುಲಕ್ಕೆ ಇನ್ನೂ ಗಂಭೀರವಾದ ಅಪಾಯವನ್ನು ಒಡ್ಡುತ್ತಿವೆ. ವಾಸ್ತವವೇನೆಂದರೆ, ಅಮೆರಿಕಾವು ಈ ಬೈಯೋ-ವೆಪನ್ಸ್‌ನ ಒಪ್ಪಂದವನ್ನು ಅನುಷ್ಠಾನಗೊಳಿಸಲಿಕ್ಕೆ ಮೀನಾ ಮೇಷ ಎನಸುತ್ತದೆ. ನಿಜವಾಗಿ ಹೇಳುವುದಾದರೆ, ಇತ್ತೀಚಿನ ಈ ಬೈಯೋ-ವೆಪನ್ಸ್‌ನ ಒಪ್ಪಂದದ ಪ್ರಯತ್ನವನ್ನು ಅಸ್ಥಿರಗೊಳಿಸಲಾಗಿದೆ. ಕಾರಣ ಅಮೆರಿಕಾವು ಹೊಸ ನ್ಯೂಕ್ಲಿಯರ್ ಆಯುಧಗಳ ಸಿದ್ಧತೆ ಮತ್ತು ಸ್ಪೆಸ್ ಮಿಲಿಟರೀಕರಣದ ಮುಂದಾಳುತನದ ಹುಮ್ಮಸ್ಸಿನಲ್ಲಿದೆ.

ಸಧ್ಯಕ್ಕೆ ಇವುಗಳೇ ಭಯಾನಕ ಅಪಾಯಗಳು. ಈ ನಾಶಗಳಿಂದ ನಾವು ಏನಾದರೂ ಗಮನಿಸಿದ್ದರೆ, ಜೀವಸಂಕುಲವು ಇಷ್ಟು ಕಾಲ ಬದುಕಿ-ಉಳಿದಿದ್ದೆ ಆಶ್ಚರ್ಯವೆಂದು ಯಾವ ಪ್ರಜ್ಞಾವಂತರಿಗಾದರೂ ಅನ್ನಿಸುತ್ತದೆ. ಭವಿಷ್ಯದ ಬದುಕಿನಲ್ಲಿ ಯಾವುದೇ ಪ್ರತಿರೋಧಕ್ಕೆ ಅವಕಾಶವೇ ಇಲ್ಲ ಅನ್ನುವದು ವೇಧ್ಯವಾಗುತ್ತೆ. ಇದಕ್ಕಿಂತ ಹೆಚ್ಚಾಗಿ ಇನ್ನೂ ಭಯಾನಕ ಅಪಾಯಗಳು ಕಾದಿವೆ. ಅಂದರೆ, ಯಾರಿಗೂ ಅರ್ಥವಾಗದ ಜೀವಪರಿಸರದ ಅಪಾಯಗಳು ಇರುವುದು ಶೋಚನಿಯ. ಆದರೆ, ವಿಜ್ಞಾನಿಗಳ ನಡುವಿನ ಒಟ್ಟಭಿಪ್ರಾಯ ಅವರು ಈ ಕುರಿತು ತುಂಬಾ ಗಂಭೀರವಾಗಿ ಚಿಂತನೆ ನಡಸುತ್ತವೆ ಎಂದು. ಈ ಅಸಮಾನಂತರ (ನಾನ್‌ಲೀನಿಯರ್) ಪ್ರಕ್ರಿಯೆಯಲ್ಲಿ ಈ ಬದಲಾವಣೆಗಳು ಆಗುತ್ತಿವೆ. ಅಂದರೆ, ಸಣ್ಣ-ಪುಟ್ಟ ವ್ಯತ್ಯಾಸಗಳು, ಬದಲಾವಣೆಗಳು ಭಾರೀ ಅನಾಹುತವನ್ನು ಮಾಡುತ್ತವೆ. ಇಂತಹ ಯಾವುದೇ ಮುನ್ಸೂಚನೆಯ ಸುಳಿವು ಇಲ್ಲದ ಪರಿಣಾಮಗಳು ಮತ್ತು ಮಾರಕ ಅಪಾಯಗಳ ಸಾಧ್ಯತೆಗಳು ಘಟಿಸಬಹುದು. ಒಟ್ಟಿನಲ್ಲಿ ಜೀವಸಂಕುಲವು ಅಪಾಯದ ಸ್ಥಿತಿಯಲ್ಲಿದೆ. ಪ್ರಜ್ಞಾವಂತರಿಗೂ ಈ ಜೀವಸಂಕುಲದ ಉಳಿವಿಗಾಗಿ ಪ್ರತಿರೋಧ ಒಡ್ಡುವುದು ಕೂಡಾ ಸಾಧ್ಯವಾಗುತ್ತಿಲ್ಲ.

ಡೇವಿಡ್: ಈ ಮಾನವಕುಲ ಬದುಕಿ ಉಳಿಯುತ್ತದೆಯಾ? ಅಥವಾ ವಿನಾಶದಂಚಿನಲ್ಲಿದೆಯಾ?
ಚೋಮ್‌ಸ್ಕಿ: ಇದು ನಾವು ಹೇಗೆ ನಮ್ಮ ಉದ್ದೇಶ/ವಿಧಿಯನ್ನು ನಿಯಂತ್ರಿಸುತ್ತವೆ ಅನ್ನುವದರ ಮೇಲೆ ನಿರ್ಧಾರ ವಾಗುತ್ತೆ. ನಮಗೆ ಇದನ್ನು ನಿಭಾಯಿಸುವ ಮಾರ್ಗೋಪಾಯಗಳಿವೆ. ಅಂದರೆ, ವಿಧ್ವಂಸಕ ಆಯುಧಗಳನ್ನು ಸ್ಪೇಸ್‌ನಲ್ಲಿಡುವ ಅಥವಾ ಜೀವಪರಿಸರವನ್ನು ಹೈಡ್ರೊಕಾರ್ಬನ್ಸ್‌ನಿಂದ ನಾಶಗೊಳಿಸುವ ಮಾರಕ ಅಪಾಯಗಳಿಗೆ ಅವಕಾಶ ನೀಡುವುದು ಯಾವುದೇ ಕಾನೂನಿನ ಸ್ವರೂಪವಲ್ಲ. ಮತ್ತು ಇವು ಕೇವಲ ಆಯ್ಕೆಗಳು ಮಾತ್ರ.

ಡೇವಿಡ್: ನಿಮಗೆ ಏನು ಭರವಸೆ ಕೊಡುತ್ತೆ?
ಚೋಮ್‌ಸ್ಕಿ: ಸಂಕ್ಷಿಪ್ತವಾಗಿ ಉತ್ತರಿಸುವದಾದರೆ ಇದು ನಿಜವಾಗಿ ಅಂತಹ ಮಹತ್ವದ ಪ್ರಶ್ನೆ ಅಲ್ಲ. ಆದ್ದರಿಂದ, ನಾವು ಎಷ್ಟು ಆಶಾವಾದಿಗಳು ಆಗಿದ್ದೀವಿ ಅಂತ ವೈಯಕ್ತಿಕವಾಗಿ ನಿರ್ಣಯಿಸುವುದು ಅಸಾಧ್ಯತೆಗಳ ಅಪ್ರಸ್ತುತ ಲೆಕ್ಕಾಚಾರವೇ ಸರಿ. ಆದರೆ ನಾವು ಒಂದನ್ನು ಸ್ಪಷ್ಟವಾಗಿ ಗುರುತಿಸುವುದೇನೆಂದರೆ, ಜಗತ್ತಿನಾದ್ಯಂತ ಜನಗಳು ಹಲವಾರು ಬಿಕ್ಕಟ್ಟುಗಳನ್ನು ಮತ್ತು ಸಂಕಷ್ಟಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ, ನಮ್ಮ ವೈಯಕ್ತಿಕ ಅನಿಸಿಕೆ/ಉಹೆಗಳಿಗೆ ಗಮನ ಕೊಡುವುದು ಅಷ್ಟು ಸೂಕ್ತವಲ್ಲ. ಹಾಗಾಗಿ ನಾವು ನಮ್ಮ ಸ್ವಾತಂತ್ರವನ್ನು ಮತ್ತು ಅದರ ಸವಲತ್ತನ್ನು ಅನುಭವಿಸುವ ಸಾಧ್ಯತೆಗಳ ಬಗ್ಗೆ ಯೋಚಿಸುವುದು ಅಗತ್ಯ ಮತ್ತು ಸೂಕ್ತ ಎಂದು ನನ್ನ ಅಭಿಮತ.

ಮೂಲ: ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನ.
ಕನ್ನಡಕ್ಕೆ: ಮೇಟಿ ಮಲ್ಲಿಕಾರ್ಜುನ
ಪುಟದ ಮೊದಲಿಗೆ

Votes: 3 Rating: 5


ಸರ್, ಕನ್ನಡಕ್ಕೆ ಚೋಮ್ ಸ್ಕಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಿಂದ ಈ ರೀತಿಯ ಅನುವಾದಗಳು ಇನ್ನು ಹೆಚ್ಚೆಚ್ಚು ಬರಲಿ. ದಿನೇಶ್ ಹಾಸನ್...

ಮೇಟಿ, ಒಂದು ಸಲಹೆ. ನಿಮ್ಮ ಕನ್ನಡ ಬರವಣಿಗೆಯನ್ನು ಮೊದಲು ಸುಧಾರಿಸಿ. ಸ್ವಂತ ಲೇಖನಗಳನ್ನು ಬರೆದು ಅಭ್ಯಾಸ ಮಾಡಿ. ನಂತರ ಅನುವಾದಕ್ಕೆ ಇಳಿಯಿರಿ....

ಸಂದರ್ಶನದ ಕೆಟ್ಟ ಅನುವಾದ. ಸಂದರ್ಶನ ಬಹುಷಃ ಒಳ್ಳೆಯದಿದೆ. ಒರಿಜಿನಲ್ ಸಂದರ್ಶನದ ಲಿಂಕ್ ಕೊಡಿ ಮೇಟಿಯವರೆ. -ವರಾಹ...
Re: My intention was to translate Chomsky into Kannada that I did it. I do not know what is “the best translation” may be, it depends, the way you take it. http://www.chomsky.info Language, Politics, and Propaganda -Noam Chomsky interviewed by David Jay Brown
Re: Thank you. Sorry if I have hurt you. But your Kannada is not free flowing. It is difficult to comprehend you in a single read. Please keep writing. - Varaha
Re: No, its o.k. thanks for feedback. meti


chomsky abhiprayagalella eshtu nikharavaagide! naada...

Many people heard about Chomsky but only few understood him better. It is necessary to understand Chomsky as far as Karnataka socio-political crises is concerned. You please translate Chomsky more and more to Kannada....
Re: uttama baraha. praveen mavinsara, your student

No comments: